ಮುದಲಿಯಾರ್, ತಿರು ವಿ, ಕಲ್ಯಾಣ ಸುಂದರಮ್
1883-1953. ಸಾಹಿತಿ, ದೇಶಭಕ್ತ, ಪತ್ರಿಕೋದ್ಯಮಿ, ಸಮಾಜ ಸುಧಾರಕ. ತಿರು ವಿ. ಕ. ಎಂದೇ ಪ್ರಸಿದ್ಧರಾದ ಇವರು ತಮಿಳುನಾಡಿನ ಚೆಂಗಲ್‍ಪೇಟೆ ಜಿಲ್ಲೆಯ ತುಳ್ಳಮ್ ಗ್ರಾಮದಲ್ಲಿ 26-8-1883ರಂದು ಹುಟ್ಟಿದರು. ತಂದೆ ವಿರುತ್ತಾಚಲ ಮುದಲಿಯಾರ್, ತಾಯಿ ಚಿನ್ನಮ್ಮಾಳ್. ಇವರ ಆರಂಭ ಶಿಕ್ಷಣ ಆರ್ಯನ್ ಪ್ರೈಮರಿ ಶಾಲೆಯಲ್ಲೂ ಉನ್ನತಶಿಕ್ಷಣ ವೆಸ್ಲಿ ಕಾಲೇಜಿನಲ್ಲೂ ನಡೆಯಿತು. ತಾರುಣ್ಯದಲ್ಲಿ ಬಾಲಸುಬ್ರಮಣಿಯ ಭಕ್ತಜ್ಞಾನ ಸಭೆ ಹಾಗೂ ಶೈವಸಿದ್ಧಾಂತ ಮಹಾಸಭೆಯಲ್ಲಿ ಪ್ರಮುಖಪತ್ರವಹಿಸಿದ್ದರು. ಜಾಬ್ನಾದ ಕಂದಸ್ವಾಮಿ ಪಿಳ್ಳೈ, ಮಹಾವಿದ್ವಾನ್ ತಣಿಹಾಚಲ ಮುದಲಿಯಾರ್, ಮರೈಮಲೈ ಅಡಿಗಳ್ ಮುಂತಾದವರು ಇವರ ಗುರುಗಳು. ಮುಖ್ಯನ್ಯಾಯಾಧೀಶ ಸದಾಶಿವ ಅಯ್ಯರ್, ಅನಿಬೆಸೆಂಟ್, ರೈಟ್ ಆನರಬಲ್ ಶ್ರೀನಿವಾಸ ಅಯ್ಯಂಗಾರ್ ಮೊದಲಾದ ಹಿರಿಯರೊಡನೆ ಇದ್ದು ಸೇವೆ ಸಲ್ಲಿಸಿದ್ದಾರೆ.

ತಿರು ವಿ.ಕ. ಅವರು ಮೊದಲು ಸ್ಟೆನ್ಸರ್ ಕಂಪೆನಿಯಲ್ಲಿ ಕೆಲಸ ಮಾಡಿದರು. ಬಾಲ ಗಂಗಾಧರ ತಿಲಕರು ಬಂಧನರಾದ ಸುದ್ದಿಕೇಳಿದ ಇವರು ಆ ಕೆಲಸವನ್ನು ಬಿಟ್ಟರು. ಅನಂತರ ಆದಿ ದ್ರಾವಿಡ ಸ್ಕೂಲ್, ತೌಸನ್ಡ್ ಲೈಟ್ ಸ್ಕೂಲ್‍ಗಳಲ್ಲಿ ಅಧ್ಯಾಪಕರಾದರು ಆಮೇಲೆ ವೆಸ್ಲೆ ಕಾಲೇಜಿನಲ್ಲಿ ಪ್ರಥಮ ತಮಿಳು ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು.
ಇವರು ದೇಶಭಕ್ತನ್ (1917) ಎಂಬ ಪತ್ರಿಕೆಯನ್ನು ಆರಂಭಿಸಿ, ಜನರ ಮನದಲ್ಲಿ ದೇಶಭಕ್ತಿಯನ್ನು ಮೂಡಿಸಿದರು. 1918ರಲ್ಲಿ ಮೊತ್ತಮೊದಲಿಗೆ ಮದರಾಸಿನಲ್ಲಿ ಕಾರ್ಮಿಕ ಸಂಘ ಸ್ಥಾಪಿಸಿದರು. ಬಕ್ಕಿಂಗ್‍ಹಾಮ್‍ಮಿಲ್ ಕೆಲಸಗಾರರ ಹೋರಾಟದಲ್ಲಿಯೂ ಭಾಗವಹಿಸಿದರು. ಸರ್ಕಾರದ ತಡೆ ಆಜ್ಞೆಯಿಂದ ದೇಶಭಕ್ತನ್ ಪತ್ತಿಕೆಯನ್ನು ಕೈಬಿಟ್ಟ ಮೇಲೆ ನವಶಕ್ತಿ (1920) ಎಂಬ ವಾರಪತ್ರಿಕೆಯನ್ನು ಆರಂಭಿಸಿದರು. ಇವರು ಧಾರ್ಮಿಕ, ಶೈಕ್ಷಣಿಕ ಸಾಮಾಜಿಕ ಮುಂತಾದ ನಾನಾ ಕ್ಷೇತ್ರಗಳಲ್ಲಿ ಸೇವೆಸಲ್ಲಿಸಿದ್ದಾರೆ. ಕೆಳವರ್ಗದವರ ಮೇಲ್ಮೆಗಾಗಿಯೂ ಗಾಂಧೀಜಿಯವರ ತತ್ತ್ವಗಳನ್ನು ಹರಡುವುದರಲ್ಲಿಯೂ ಬಹಳವಾಗಿ ದುಡಿದರು. ಇವರ ಸೇವೆಯನ್ನು ಕೊಂಡಾಡದವರೇ ವಿರಳ.

ಇವರು ಪೆರಿಯ ಪುರಾಣಕ್ಕೂ, ಕಾರೈಕ್ಕಾಲ್ ಅಮ್ಮೈಯವರ ಪ್ರಬಂಧಗಳಿಗೂ ವ್ಯಾಖ್ಯಾನ ಬರೆದಿದ್ದಾರೆ. ತಿರುಕ್ಕು¾ಳಿನ ಮೊದಲ ಹತ್ತು ಅಧಿಕಾರಗಳಿಗೆ ವಿಸ್ತಾರ ವ್ಯಾಖ್ಯಾನ ಬರೆದಿದ್ದಾರೆ. ತಮಿ¿Âಸೋಲೈ, ತಮಿ¿Âತೆನ್¾ಲ್, ಸೀರ್‍ತಿರುತ್ತಮ್, ಮುಡಿಯಾ ಕಾದಲಾ ಸೀರ್ ತಿರುತ್ತಮಾ. ಇಂದಿಯಾವುಮ್ ವಿಡುದಲೈಯಮ್, ಮುರುಗನ್ ಅಥವಾ ಅ¿ಗು, ಮನಿದ ವಾ¿ುïಕೈಯುಮ್ ಗಾಂದಿ ಯಡಿಗಳಮ್. ಪೆಣ್ಣಿನ್ ಪೆರುಮೈ, ಪರಮ್ ಪೊರುಳ್ ಅಥವಾ ವಾ¿õïಕ್ಕೈ ಒಳಿ__ಮುಂತಾದವು ಇವರ ಪ್ರಸಿದ್ಧ ಗದ್ಯ ಗ್ರಂಥಗಳು. ರಾಮಲಿಂಗ ಸ್ವಾಮಿಗಳ್ ತಿರುವುಳ್ಳಮ್, ಶೈವತ್ತಿನ್ ಸಮರಸಮ್. ಶೈವತಿಯವು. ಸನ್ಮಾರ್ಗ ಬೋಧಮಮ್, ತಿರುವುಮ್ ಸಮರಸ ಸನ್ಮಾರ್ಗ ತಿ¾ವು. ತಮಿಳ್‍ನಾಡುಮ್ ನಮ್ಮಾಳ್ವಾರುಮ್, ಇಮಯ ಮಲೈ. ಕಡವುಳ್ ಕಾಕ್ಷಿಯಮ್ ತಾಯು ಮಾನಾರುಮ್ ತಮಿಳ್‍ನೂಲ್‍ಗಳಿಲ್ ಭೌತ್ತಮ್. ನಿನೈಪ್ಪವರ್ ಮನಮ್, ಶೈವ ಸಮಯಸಾರಮ್ ಮುಂತಾದವು ಇವರು ಧರ್ಮ ಹಾಗೂ ಮತವನ್ನು ಕುರಿತು ಬರೆದಿರುವ ಗದ್ಯ ಗ್ರಂಥಗಳು. ಇವರು ಸರಳಜೀವಿಗಳಷ್ಟೇ ಅಲ್ಲ; ಶುದ್ಧಜೀವನ ನಡೆಸಿದವರು. ಇವರು 17-9-1953ರಲ್ಲಿ ಮರಣ ಹೊಂದಿದರು.										
(ವಿ.ಪಿ.ಇ.)